Saturday, August 22, 2015




ಹಿತ್ತಲ ಗಿಡಗಳ ಪರಿಚಯ ಮತ್ತು ಉಪಯೋಗ  

1) ಸಾಂಬ್ರಾಣಿ 
ಉಪಯೋಗಗಳು:
·       ಕಫ,ತಲೆ ಸಿಡಿತ,ಕೆಮ್ಮು ನಿವಾರಣೆಗೆ ಉಪಯೋಗಿಸಬಹುದು:ಸಾಂಬ್ರಾಣಿ ಗಿಡದ ಎಲೆಗಳನ್ನು ಬಾಡಿಸಿ ಅದರ ರಸವನ್ನು ಜೇನಿನೊಂದಿಗೆ ಸೇರಿಸಿ ಒಂದು ಚಮಚದಷ್ಟು ತಿನ್ನಬೇಕು.
·       ಚಟ್ನಿ ಮತ್ತು ಸಾಂಬಾರು ಮಾಡಬಹುದು.
.   ಮೈಮೇಲೆ ಗಜ್ಜಿ ,ತುರಿಕೆ ಎದ್ದಲ್ಲಿ ಸಾಂಬ್ರಾಣಿ  ಗಿಡದ ಎಲೆಗಳನ್ನು ಜಜ್ಜಿ ರಸವನ್ನು ಮೈಮೇಲೆ ಹಚ್ಚಬೇಕು.  ದಿನಕ್ಕೆ 4 -5 ಬಾರಿ ಸಚ್ಚುವುದರಿಂದ ಮೈಮೇಲಿನ ಗಜ್ಜಿ ತುರಿಕೆ ಕಡಿಮೆಯಾಗುತದ್ದೆ


2) ದರ್ಭೆ ಹುಲ್ಲು .

ಉಪಯೋಗಗಳು:
·       ಪೂಜಾ ಮತ್ತು ಶ್ರಾದ್ಧ ಕಾರ್ಯಕ್ರಮಕ್ಕೆ ಉಪಯೋಗಿಸುತ್ತಾರೆ.
ದರ್ಭೆ ಇದ್ದಲ್ಲಿ ದುಷ್ಟ ಶಕ್ತಿ ಇಲ್ಲ ಎಂದು ನಂಬಿಕೆ

3) ಲೋಳೆ ಸರ  ಗಿಡ

    ಉಪಯೋಗಗಳು:

·       ದನಗಳ ಕೆಚ್ಚಲು ಬಾವಿಗೆ ಉಪಯೋಗಿಸುತ್ತಾರೆ.Ø   ಇದರ ಎಲೆಗಳನ್ನು ಅರಸಿನ ಹುಡಿಯೊಂದಿಗೆ ಬೆರೆಸಿ ದಿನಕ್ಕೆ ೪-೫ ಬಾರಿ ಕೆಚ್ಚಲಿಗೆ ಹಚ್ಚಬೇಕು.·          ತಲೆಹೊಟ್ಟು ನಿವಾರಣೆಗೆ ಇದು ಉತ್ತಮ ಔಷದ.

              


No comments:

Post a Comment