Saturday, September 26, 2015

ಹಳ್ಳಿ ಔಷಧದ ಬಗ್ಗೆ ಕಿರು ಪರಿಚಯ .

ಜ್ವರ , ಶೀತ , ಕಫ  ಇತ್ಯಧಿಗಳಿಗೆ ದಿವ್ಯ ಔಷಧ .


ಆಯುರ್ವೇದಿಕ್   ಗಿಡಮೂಲಿಕೆಗಳ ಕಿರು ಪರಿಚಯ .
೧) ಕಿರಾತ ಕಡ್ಡಿ .
 ಮಲೆನಾಡಿನ ಮನೆಯ ಸುತ್ತ  ಮುತ್ತಲು ಸಾಮಾನ್ಯವಾಗಿ ಈ ಗಿಡಗಳನ್ನು ಕಾಣಬಹುದು . ಪೊದರು ಜಾತಿಯ ಗಿಡ .



೨) ಅಮೃತ  ಬಳ್ಳಿ .
 ಸಾಮಾನ್ಯವಾಗಿ ಗಿಡಮರಗಳ ಆಶ್ರಯದಲ್ಲಿ ಬೆಳೆಯಬಲ್ಲ ಬಳ್ಳಿ .





೩) ಭದ್ರ ಮುಷ್ಠಿ :-
ಸಾಮಾನ್ಯವಾಗಿ ಮನೆಯ ಅಂಗಳದಲ್ಲಿ ಈ ಸಸ್ಯಗಳು ಬೆಳೆಯುತ್ತವೆ . ಭದ್ರ ಮುಷ್ಟಿಯ  ಗಡ್ಡೆಗಳನ್ನು  ಔಷಧಿಗೆ ಉಪಯೋಗಿಸುತ್ತಾರೆ .


೪) ಕಾಳು  ಮೆಣಸು .
ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ .
 ಔಷಧೀಯ ಗುಣಗಳನ್ನು ಹೊಂದಿರುತ್ತದೆ .






೫)   ಶುಂಠಿ .      

ಸಾಂಬಾರು ಪದಾರ್ಥಗಳಲ್ಲಿ ಉಪಯೋಗಿಸುತ್ತಾರೆ .
 ಔಷಧೀಯ ಗುಣಗಳನ್ನು ಹೊಂದಿರುತ್ತದೆ  








ಔಷಧಿ ತಯಾರಿಸುವ ವಿಧಾನ .
1)  ಚಿತ್ರದಲ್ಲಿ ತೋರಿಸಿದ ಹಾಗೆ   ಎಲ್ಲ ಔಷಧಿಯ ವಸ್ತುಗಳನ್ನು ತೆಗೆದುಕೊಳ್ಳಬೇಕು .
೧) ಕಿರಾತ ಕಡ್ಡಿ  --  25 gram 
೨) ಅಮೃತ  ಬಳ್ಳಿ --  25 gram 
೩) ಭದ್ರ ಮುಷ್ಠಿ   --   25 gram 
೪) ಕಾಳು  ಮೆಣಸು  --  5 gram 
೫)  ಶುಂಠಿ  -- 25 gram  



2)  ಎಲ್ಲ ಔಷಧಿಯ ವಸ್ತುಗಳನ್ನು ಕಲ್ಲಿನಲ್ಲಿ ಕುಟ್ಟಿ ಪುಡಿ ಮಾಡಬೇಕು .
  






3)   ಕಷಾಯ ತಯಾರಿಸುವ ವಿಧಾನ

 ಕಲ್ಲಿನಲ್ಲಿ ಜಜ್ಜಿದ ಎಲ್ಲ  ಗಿಡ   ಮೂಲಿಕೆಗಳನ್ನು  , ಒಂದು ಪಾತ್ರೆಯಲ್ಲಿ 800 ML ನೀರು ಹಾಕಿ 200 ML ಆಗುವ ತನಕ ಕುದಿಸ ಬೇಕು . ದಿನಕ್ಕೆ  3 ಬಾರಿ ಸೇವಿಸ ಬೇಕು .  ಆಹಾರ ತೆಗೆಯುವ ಮೊದಲು ಉತ್ತಮ .  ( ಒಂದು ಬಾರಿಗೆ 50 ML   ಔಷಧಿಯನ್ನು ಸೋಸಿ   ಕುಡಿಯಬಹುದು .)

ಇದರ ಉಪಯೋಗಗಳು .
ಯಾವುದೇ ದುಷ್ಪರಿಣಾಮ ಇರುವುದಿಲ್ಲ .
ಇದು ದೇಹದಲ್ಲಿ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ .




Thank you ..